ಯಾಕೆ ಫಾರ್ಮ್‌ರೈಸ್ ಡೌನ್‌ಲೋಡ್ ಮಾಡಬೇಕು?
👍15 ರಾಜ್ಯಗಳಲ್ಲಿನ 10 ಭಾಷೆಗಳಲ್ಲಿ ದೊರೆಯುತ್ತದೆ (ಇಂಗ್ಲೀಷ್, ಹಿಂದಿ, ಕನ್ನಡ, ಮರಾಠಿ, ತೆಲುಗು, ಗುಜರಾತಿ, ಒಡಿಯಾ, ಪಂಜಾಬಿ, ಬಾಂಗ್ಲಾ).
👍 ಬೆಳೆಯ ಆವರ್ತನೆಯ ಆಧಾರದಲ್ಲಿ ಕೃಷಿ ಪದ್ಧತಿಗಳ ಮಾಹಿತಿಯನ್ನು ಒದಗಿಸುವ ಏಕೈಕ ಆ್ಯಪ್ ಆಗಿದೆ.
👍ರೈತರು ತಮ್ಮ ಇಚ್ಛೆಯ ಭಾಷೆಯಲ್ಲಿ ಎಲ್ಲಾ ಬೆಳೆಗಳ ಬೇಸಾಯ ಪದ್ಧತಿಯನ್ನು ಆಲಿಸಬಹುದಾದ ಏಕೈಕ ಆ್ಯಪ್.
👍ಭಾರತೀಯ ಡಿಜಿಟಲ್ ಕೃಷಿ ರಂಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆ್ಯಪ್ ಆಗಿದೆ!
ಫಾರ್ಮ್‌ರೈಸ್ ರೈತರಿಗೆ ಏನನ್ನು ಒದಗಿಸುತ್ತದೆ:
🌿 ಕೃಷಿಯ ವೈಜ್ಞಾನಿಕ ಸಲಹೆ: ಭಾರತದಲ್ಲಿ ಸುಸ್ಥಿರ ಮತ್ತು ಲಾಭದಾಯಕವಾದ ಕೃಷಿಯನ್ನು ಮಾಡಲು ನಿಖರವಾದ ಮತ್ತು ನಿರ್ದಿಷ್ಟವಾದ ವೈಜ್ಞಾನಿಕ ಸಲಹೆಯನ್ನು ರೈತರು ಪಡೆಯಬಹುದು. ಭಾರತೀಯ ರೈತರು ಬೆಳೆವಾರು ಮತ್ತು ಹಂತವಾರು ಕೃಷಿ ಸಲಹೆಯನ್ನು ಪಡೆಯಬಹುದು ಮತ್ತು ಎಲ್ಲಾ ಕೃಷಿಪದ್ಧತಿಗಳನ್ನು ಆದ್ಯತೆಯ ಭಾಷೆಯಲ್ಲಿ (ಇಂಗ್ಲಿಷ್, ಹಿಂದಿ, ಗುಜರಾತಿ, ಮರಾಠಿ, ಕನ್ನಡ ಮತ್ತು ತೆಲುಗು) ಆಲಿಸಬಹುದು.
🌿 ಮಂಡಿ ದರಗಳು: ಭಾರತದಾದ್ಯಂತ ಬೆಳೆವಾರು ಇತ್ತೀಚಿನ ಮತ್ತು ನೈಜ ಸಮಯದ 400 ಕ್ಕೂ ಹೆಚ್ಚಿನ ಮಂಡಿಗಳ ದರಗಳನ್ನು ಪಡೆಯಿರಿ. ಈಗ ನೀವು ಒಂದು ನಿರ್ದಿಷ್ಟ ಮಾರುಕಟ್ಟೆಯಲ್ಲಿ ಒಂದು ನಿರ್ದಿಷ್ಟ ಬೆಳೆಗಾಗಿನ ಮಂಡಿಯ ದರದ ಬಗ್ಗೆ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಿರುತ್ತದೆ.
🌿 ಹವಾಮಾನ: ಫಾರ್ಮ್‌ರೈಸ್ ರೈತರಿಗೆ ದೈನಂದಿನ ತಾಪಮಾನ, ಮಳೆ ಮತ್ತು ತೇವಾಂಶದ ನವೀಕರಣಗಳನ್ನು ಒದಗಿಸುತ್ತದೆ. ಮುಂದಿನ 9 ದಿನಗಳ ತಾಪಮಾನ ಮತ್ತು ಮಳೆಯ ಮಾಹಿತಿಯನ್ನು ನೀವು ಆ್ಯಪ್ ಮೂಲಕ ಪ್ರತಿ ಗಂಟೆಗೊಮ್ಮೆ ಪಡೆಯಬಹುದು. ರೈತರು ತಮ್ಮ ಬೆಳೆಗಳು ಮತ್ತು ಹೊಲಗಳಿಗೆ ಸಂಬಂಧಿಸಿದಂತೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಹಾಯ ಮಾಡುತ್ತದೆ.
🌿 ತಜ್ಞರ ಲೇಖನಗಳು: ಈಗ ಭಾರತದಾದ್ಯಂತ ರೈತರು ಫಾರ್ಮ್‌ರೈಸ್ ಕೃಷಿ ತಜ್ಞರು ಬರೆದ ವಿವಿಧ ಲೇಖನಗಳನ್ನು ಓದಬಹುದು. ನೀವು ನಿಮ್ಮ ಕೃಷಿ ಅನುಭವವನ್ನು ನಮ್ಮೊಡನೆ ಹಂಚಿಕೊಳ್ಳುವ ಮೂಲಕ ಕೊಡುಗೆ ನೀಡಬಹುದು ಮತ್ತು ಹಂಚಿಕೊಳ್ಳಬಹುದು.
🌿 ಸುದ್ದಿ ಮತ್ತು ಘಟನೆಗಳು: ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ದೈನಂದಿನ ಮತ್ತು ಪ್ರಾದೇಶಿಕ ಸುದ್ದಿಗಳನ್ನು ಪಡೆಯಿರಿ ಮತ್ತು ಗ್ರಾಮೀಣ ವಲಯದಲ್ಲಿನ ರಾಷ್ಟ್ರವ್ಯಾಪಿ ಕೃಷಿ ಸಂಬಂಧಿತ ವ್ಯಾಪಾರ ಮತ್ತು ಪ್ರದರ್ಶನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.
🌿 ನನ್ನ ಫಾರ್ಮ್ ಪತ್ತೆ ಮಾಡಿ: ಹತ್ತಿರದ ಮಂಡಿ ದರಗಳು ಮತ್ತು ನಿಖರವಾದ ದೈನಂದಿನ ಮತ್ತು ಪ್ರತಿಗಂಟೆಯ ಹವಾಮಾನ ನವೀಕರಣಗಳನ್ನು ಪಡೆಯಲು "ನನ್ನ ಫಾರ್ಮ್ ಅನ್ನು ಹುಡುಕಿ" ವೈಶಿಷ್ಟ್ಯವನ್ನು ಬಳಸಿಕೊಂಡು ರೈತರು ಈಗ ಯಾವುದೇ ಸಮಯದಲ್ಲಿ ತಮ್ಮ ಪ್ರಸ್ತುತ ಸ್ಥಳವನ್ನು ನವೀಕರಿಸಲು ಸಾಧ್ಯವಾಗುತ್ತದೆ.
ಹಕ್ಕು ನಿರಾಕರಣೆಗಳು:
1) ಫಾರ್ಮ್‌ರೈಸ್ ಆ್ಯಪ್ ಒಂದು ಸ್ವತಂತ್ರ ಆ್ಯಪ್ ಆಗಿದೆ ಮತ್ತು ಇದು ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಸಂಸ್ಥೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಪಟ್ಟಿಲ್ಲ.
2) ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಲೇಖನಗಳನ್ನು ಮಾಧ್ಯಮಗಳು ಮತ್ತು ಸಾರ್ವಜನಿಕ ಗ್ರಂಥಾಲಯಗಳಿಂದ ಆಯ್ದು ಸಂಗ್ರಹಿಸಲಾಗಿದೆ
ನಾನು ನಿಮ್ಮ ಅಭಿಪ್ರಾಯವನ್ನು ಪಡೆಯಲು ಇಚ್ಚಿಸುತ್ತೇವೆ! support@farmrise.com ಮೂಲಕ ನಮಗೆ ಬರೆಯಿರಿ
ಜ್ಞಾನ ಅಪಾರ, ರೈತರ ಉದ್ಧಾರ!👨🏻🌾
ಅಪ್‌ಡೇಟ್ ದಿನಾಂಕ
ಅಕ್ಟೋ 31, 2025